ಶನಿವಾರ, ಫೆಬ್ರವರಿ 18, 2012
ಭಾನುವಾರ, ನವೆಂಬರ್ 20, 2011
ಭಾನುವಾರ, ಅಕ್ಟೋಬರ್ 16, 2011
ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆ -2011

'ಒಬ್ಬ ಅವ್ವ ಇರಲಿ, ಈ ಬಿಸಿಲ ಕೂಸುಗಳಿಗೆ' ಕವನ ಈ ಬಾರಿಯ ಪ್ರತಿಷ್ಠಿತ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆಯಲ್ಲಿ (2011) ಪ್ರಥಮ ಬಹುಮಾನ ಪಡೆದಿದೆ. ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಸಿರವಾರದಲ್ಲಿ ಬಸವರಾಜ ಹೃತ್ಸಾಕ್ಷಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಎರಡನೇ ಬಹುಮಾನ ಆರೀಫ್ ರಾಜಾ ಅವರ " ಬುಖರ್ಾ ಹೌಸಿನ ಮುಂದೆ' ಕವನಕ್ಕೆ ದೊರೆತಿದೆ. ಈ ಬಾರಿ ಪ್ರಥಮ ಮತ್ತು ದ್ವಿತೀಯ ಬಹುಮಾನ ರಾಯಚೂರು ಜಿಲ್ಲೆಗೆ ದಕ್ಕಿರುವುದು ವಿಶೇಷ. ಈ ಹಿಂದೆಯೇ ಆರೀಫ್ ರಾಜಾ ಅವರ ಕವನ "ಜಂಗಮ ಪಕೀರನ ಜೋಳಿಗೆ'ಗೆ ಪ್ರಥಮ ಸ್ಥಾನ ದೊರೆತಿದ್ದನ್ನು ನಾವು ಸ್ಮರಿಸಬಹುದು.
ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗದೊಂದಿಗೆ ಜಿಲ್ಲೆಯ ಕೀತರ್ಿಯನ್ನು ಹೆಚ್ಚಿಸಿರುವ ಬಸವರಾಜ ಹೃತ್ಸಾಕ್ಷಿ ಸಿರವಾರ ಹಾಗೂ ಆರೀಫ್ ರಾಜಾ ಅವರಿಗೆ
ಹೃದಯಪೂರ್ವಕ ಅಭಿನಂದನೆಗಳು.
- ಪಿ.ಲಂಕೇಶ್ ಬಳಗ, ಸಿಂಧನೂರು (9880757380)
ಮಂಗಳವಾರ, ಸೆಪ್ಟೆಂಬರ್ 20, 2011
ಬುಧವಾರ, ಜನವರಿ 12, 2011

ಅವ್ವನಮುರಿದ ಪೆಟಾರಿಯಲಿ ಮುಚ್ಚಿಟ್ಟ ಅಂಕಪಟ್ಟಿಗಳು
ನಿನ್ನ ಚೆಲುವಿಗೆ ಬೆಂಕಿ ಹಚ್ಚಿದ ಖೂಳರು ನನ್ನ ಮೂರು ಜನುಮದ ಯಜಮಾನರು
ಮಹಲುಗಳ ಓಟಕೆ ಜೋಪಡಿ ಪಟ್ಟಿಗಳು ನರಳಿವೆ
ದಾರಿ ಹೋಕರು ಬರುವ ಮುಂಚೆ
ಭಾನುವಾರ, ಜೂನ್ 6, 2010
ಗ ಜ ಲ್
ಮನದ ಮೂಲೆಯೊಳಗೆ ಬಚ್ಚಿಟ್ಟೆ ನೂರು ಕನಸುಗಳ
ಸನಿಹವಿದ್ದು ಒಮ್ಮೆಯೂ ನೀ ಒಳಹೊಕ್ಕು ನೋಡಲಿಲ್ಲ.
ಪ್ರೀತಿ ರಕುತದಿ ಬರೆದೆ ಸಾವಿರ ಸಾವಿರ ಓಲೆಗಳ
ಕೈಗೆಟುಕಿದರೂ ಒಮ್ಮೆಯೂ ತಿರುವಿ ನೋಡಲಿಲ್ಲ.
ನಿನ ಅರಸಿ ಮರಭೂಮಿಯಲಿ ಬರಿಗಾಲಲಿ ಓಡಿದೆ
ಅಂಗಾಲಲಿ ಎದ್ದ ಗುಳ್ಳೆಗಳ ನೀ ಕಣ್ಣೆತ್ತಿ ನೋಡಲಿಲ್ಲ.
ಗೋಲಗುಂಬಜಿನಲಿ ನಿನ ಹೆಸರ ಸಾರಿ ಸಾರಿ ಕೂಗಿದೆ
ಏಳೇಳು ಬಾರಿ ಪ್ರತಿಧ್ವನಿಸಿದರೂ ನೀ ಕೇಳಲೇ ಇಲ್ಲ
ನಗುನಗುತಲಿ ಏನೂ ಹೇಳದೆ ಕೇಳದೆ ಹೋದೆಯಲ್ಲ
ನಿನ ಧ್ಯಾನದಲೇ ಕುಣಿಯೊಳಗಿದ್ದ ನನ್ನ ನೀ ನೋಡಲಿಲ್ಲ.
- ಬಸವರಾಜ ಹಳ್ಳಿ, ಹಸಮಕಲ್
ಶುಕ್ರವಾರ, ಏಪ್ರಿಲ್ 9, 2010
ಲಂಕೇಶ ಎಂಬ ಮಹಾಮಳೆ

ಬುಧವಾರ, ಮಾರ್ಚ್ 11, 2009
ತಾಯಿಯಂತ ಅಣ್ಣ ನಾಗತಿಹಳ್ಳಿ ರಮೇಶಣ್ಣ (ಅವ್ವಣ್ಣಿ)
ಅಣ್ಣನ ಮುಖದಲ್ಲಿ ಸದಾ ನಗು.ಮಾತಿನಲ್ಲಿ ಅವ್ವನ ಕಕ್ಕುಲಾತಿ.ನೀಲಗಿರಿ ಮರದ ಪರ್ವತಗಳ ಕಡೆಯಿಂದ ಬಿಸಿಲೂರ ಕಡೆಯವರೆಗೂ ನಿಂತಲ್ಲಿ ನಿಲ್ಲದೆ, ಕುಂತಲ್ಲಿ ಕೂಡದೆ ಸದಾ ಜಲಪಾದಂತೆ ಹರಿದು ತಾಯಿಪ್ರೀತಿ ಹಂಚುತ್ತಾ ನೊಂದ ಜೀವಗಳಿಗೆ ಹಗಲನ್ನೆರಡು ತಾಸು ಮಿಡಿಯುವ ಜೀವವದು. ತನ್ನ ಸ್ವಸಾಮಥ್ರ್ಯದಿಂದ ನೋಡು ನೋಡುತ್ತಲೇ ಏಕಪ್ಯಾಂಟ್ನಿಂದ ಸಾವಿರು ಕೋಟುಗಳನ್ನು ಕೊಳ್ಳಬಲ್ಲಷ್ಟು ಎತ್ತರಕ್ಕೆ ಏರಿದ ಅಣ್ಣನಿಗೆ ಬದುಕಿನಲ್ಲಿ ಸಪ್ಪಗೆ ಸಾವಿರ ವರ್ಷ ಬದುಕಿದರೂ ಅರ್ಥವಿಲ್ಲ. ಏನಾದರೂ ಸಪ್ಪಳ ಮಾಡಿ ಸಾಧಿಸಿ ತೋರಿಸಬೇಕು. ಜೀವಂತ ದೇವರು ಅವ್ವನಿಗೆ ಹೆಸರು ತರಬೇಕೆನ್ನುವ ತುಡಿತ. ತಾಯಿ ಕಕ್ಕುಲಾತಿಯ ನಾಗತಿಹಳ್ಳಿ ರಮೇಶಣ್ಣನ ಕುರಿತು ನನ್ನ ಗುರುಗಳಾದ ಕಲಿಗಣನಾಥ ಗುಡದೂರು ಅವರಿಂದ ಕೇಳಲ್ಪಟ್ಟಿದ್ದೆ. ಆದಾದ ವಾರೊಪ್ಪತ್ತಿನಲ್ಲಿ. ಅಣ್ಣ ಸಿಂಧನೂರಿಗೆ ಬಂದೆಬಿಟ್ಟರು. ಅವರನ್ನು ಮೊದಲ ಬಾರಿಗೆ ಭೇಟಿಯಾದೆ. ಅಣ್ಣನ ಸ್ಪೂತರ್ಿದಾಯಕ ಮಾತುಗಳು,ಅಪರಿಚಿತರನ್ನು ಕ್ಷಣಮಾತ್ರದಲ್ಲಿ ವಷರ್ಾನುಗಟ್ಟಲೆ ಅವರೊಂದಿಗೆ ಇದ್ದವರೇನೋ ಎನ್ನುವಂತೆ ಆತ್ಮೀಯವಾಗಿ ಕಾಣುವಪರಿ ನನಗೆ ಆಶ್ಚರ್ಯ ಮೂಡಿಸಿತು. ಅಣ್ಣ ಅವ್ವನಿಗಾಗಿ ಬರೆದ ಸಮುದ್ರ ಮತ್ತು ಮಳೆಯನ್ನು ಹಿಡಿದು ಕುಳಿತರೆ ಸದಾ ಪಾದರಸದಂತೆ ಜಗದವ್ವನೊಡಲಲ್ಲಿ ಅಲೆಮಾರಿ ಅವ್ವಣ್ಣಿ (ರಮೇಶಣ್ಣ) ಹಾದು ಬಂದ ದಾರಿ ಹೋಗುತ್ತಿರುವ ಹಾದಿ ಎಲ್ಲವನ್ನು ಗಮನಿಸಿದಂತೆ ಎದೆಯಲ್ಲಿ ಸಮುದ್ರ ಮತ್ತು ಮಳೆಯ ಬೋರ್ಗರೆತ ಹೆಚ್ಚುತ್ತದೆ. ಕಪಾಳದ ತುಂಬೆಲ್ಲಾ ಕಣ್ಣೀರ ಜಿನುಗು ಮಳೆ. ಮರಣದ ನಂತರ ನಮ್ಮನ್ನು ನೆಲದೊಳಗಿನ ಗೋರಿಗಳೊಂದಿಗೆ ಕಾಣಬಾರದು, ಸಹಮಾನವರ ಎದೆಗಳಲ್ಲಿ ಕಾಣುವಂತಾಗಬೇಕು ಎನ್ನುವ ಜಲಾಲುದ್ದೀನ್ ರೂಮಿಯ ಉಕ್ತಿಯನ್ನು ಪ್ರಸ್ತಾಪಿಸಿರುವ ಅವ್ವಣ್ಣಿ ಅದರಂತೆ ಬದುಕುತ್ತಿದ್ದಾರೆ. ಅವ್ವಣ್ಣಿ (ರಮೇಶಣ್ಣ) ನೆಪ್ಪಿಗೆ ಬಂದಾಗಲೆಲ್ಲಾ ಅಣ್ಣಾವ್ರ ಕಸ್ತೂರಿ ನಿವಾಸ ಸಿನಿಮಾ ಮನಪಟಲದಲ್ಲಿ ಮೂಡುತ್ತದೆ. ಅಣ್ಣನನ್ನು ಭೇಟಿಯಾಗಿ ಇಂದಿಗೆ ಸುಮಾರು 20 ದಿನಗಳು ಕಳೆದವು. ಈಗ ಮತ್ತೆ ಮತ್ತೆ ಹೆತ್ತವ್ವ ನೆನೆಪಾಗುತ್ತಾಳೆ. ಆಗಾಗ ಕೆಲಸಕ್ಕೆ ಸಲಾಂ ಹೊಡೆದು ಊರ ಕಡೆ ಓಡಿ ಮತ್ತೆ ಹಿಂತಿರುಗುತ್ತೇನೆ. ಅಣ್ಣ ನನಗೆ ಒಂದು ಪಾಠವಾದ. ಅಣ್ಣ (ಅವ್ವಣ್ಣಿ) ನಂತವರಿಗೆ ಜಗದವ್ವನ ಆಶೀವರ್ಾದ ಇದ್ದೆ ಇರುತ್ತದೆ.
ಅಣ್ಣನ ಸಣ್ಣ ಕವಿತೆ
ರಾಗಿ, ಭತ್ತ
ಹುಟ್ಟುತ್ತ ಬೆಳೆಯುತ್ತ
ಆಗಸವನ್ನೇ ದಿಟ್ಟಿಸುತ್ತವೆ
ಫಲದ ಹೊನ್ನ ಕಿರೀಟ
*************************
- ಬಸವರಾಜ ಹಳ್ಳಿ
ಸೋಮವಾರ, ಫೆಬ್ರವರಿ 16, 2009
ಗುಡದೂರು "ಮಾಮೂಲಿಗಾಂಧಿ"


ಬಹಳ ಜತನದಿಂದ ಬರೆದ ಕಥೆಗಳನ್ನು 'ಮಾಮೂಲಿ ಗಾಂಧಿ' ರೂಪದಲ್ಲಿ ಕೊಡಲು ಸಜ್ಜಾಗಿರುವ ನನ್ನ ಗುರುಗಳು ಹಾಗೂ ಕಥೆಗಾರರು ಆದ ಕಲಿಗಣನಾಥ ಗುಡದೂರು ಮೂರನೇ ಕಥಾ ಸಂಕಲನದಲ್ಲಿ ಹೊಸ ಜಾಡು ಹಿಡಿದಿದ್ದಾರೆ. ಈ ಹಿಂದಿನ ಕಥಾ ಸಂಕಲನಗಳಲ್ಲಿ ರಾಯಚೂರು ಭಾಗದ ಜನರ ಜವಾರಿ ಭಾಷೆಯನ್ನೆ ಜೀವಾಳವಾಗಿಸಿಕೊಂಡು ಕನ್ನಡ ಕಥಾಲೋಕಕ್ಕೆ ಹೊಸ ಕಥೆಗಳನ್ನು ಪೋಣಿಸಿರುವ ಅವರು ಈ ಸಲ ಮತ್ತಷ್ಟು ವಿಭಿನ್ನ ಪ್ರಯೋಗಳನ್ನು ಮಾಡಿದ್ದಾರೆ. ಬದಲಾದ ಶೈಲಿಯ ಮೂಲಕ ನೂತನ ಕಥಾವಸ್ತುವಿನೊಂದಿಗೆ ಅವರಲ್ಲಿನ ಕತೆಗಾರ ಈ ಬಾರಿ ಮಗ್ಗಲು ಬದಲಿಸಿದ್ದಾನೆ. ಈ ಹಿಂದಿನ ಸಂಕಲನದ ಕಥೆಗಳನ್ನು ಓದಿದವರು "ಮಾಮೂಲಿ ಗಾಂಧಿ" ಸಂಗ ಮಾಡಿದರೆ ಇದು ಗುಡದೂರರ ಕಥಾ ಸಂಕಲನವಾ ? ಎಂದು ಸಂಶಯಪಡುವಷ್ಟು ಕಲರ್ಫುಲ್ ಆಗಿದೆ. ಅವರ ಕಥೆಗಳು ಇನ್ನೂ ಅಚ್ಚಿಗೆ ಹೋಗುವ ಮುಂಚೆ ಮೂರ್ನಾಲ್ಕು ಬಾರಿ ಓದಿರುವ ನನಗೆ ಒಂಥರದ ಖುಷಿ. ಕೆಲ ಕಥೆಗಳನ್ನು ನನಗೆ ಹೇಳುತ್ತ ..ಹೇಳುತ್ತಲೆ...ಕಂಪ್ಯೂಟರ್ನಲ್ಲಿ ಟೈಪಿಸಿದ್ದುಂಟು. ಸಂಕಲನದ ಕಥೆಗಳು ಪ್ರಜಾವಾಣಿ ಸಾಪ್ತಾಹಿಕ, ಮಯೂರ, ಸಂಡೆ ಇಂಡಿಯನ್, ವಿಕ್ರಾಂತ ಕನರ್ಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ತಮ್ಮ ವಿಶಿಷ್ಠ ಕಥೆಗಳ ಮೂಲಕ ವಾರಿಗೆಯ ಬರಹಗಾರರಲ್ಲಿ ಅಚ್ಚರಿ ಮೂಡಿಸಿರುವ "ಮೇಷ್ಟ್ರ" ಮಾಮೂಲಿ ಗಾಂಧಿ" ಗೆ ಇಷ್ಟರಲ್ಲಿ ಬಿಡುಗಡೆಯಿದೆ.ಕವಿ, ಕಥೆಗಾರ ವಿ.ಎಂ.ಮಂಜುನಾಥ ಅದ್ಬುತವಾಗಿ ಮುಖಪುಟ ರಚಿಸಿಕೊಟ್ಟಿದ್ದಾರೆ. ಕವಿ ವಿ.ಆರ್.ಕಾಪರ್ೆಂಟರ್ ಕರಡು ತಿದ್ದುವಲ್ಲಿ ಸಹಕರಿಸಿದ್ದಾರೆ. ಅವರಿಗೆ ತುಂಬಾ ಧನ್ಯವಾದ. ಸದಾ ಕಥೆಗಳಂತೆ ಬದುಕುವ, ತಮ್ಮ ಆಜುಬಾಜಿನ ಯುವಕರಿಗೆ ಸಾಹಿತ್ಯದ ಕಿಚ್ಚುಹಚ್ಚಿ ಸಾಹಿತ್ಯದಲ್ಲಿ ತೊಡಗುವಂತೆ ಹುರಿದುಂಬಿಸುವ "ಮೇಷ್ಟ್ರ" ಪ್ರೀತಿಯ ಕಾಳಜಿಗೆ ಧನ್ಯವಾದ ಹೇಳುತ್ತಾ ಅವರ ಮಾಮೂಲಿ ಗಾಂಧಿಗಾಗಿ ಕಾಯುತ್ತಿದ್ದೇನೆ.
- ಬಸವರಾಜ ಹಳ್ಳಿ
ಗುರುವಾರ, ಫೆಬ್ರವರಿ 12, 2009
ಅಕ್ಕನ ನೆನಪಲ್ಲಿ ನಾಲ್ಕು ಬಿಕ್ಕಳಿಕೆಗಳು

ಸಿಂಧನೂರಿನ ರಸ್ತೆಯ ಎಡಬಲಗಳಲ್ಲಿ ಜೈನ್ದೀಕ್ಷೆ ಪಡೆಯಲಿರುವ ಅಕ್ಕ ಸೋನಲ್ ನಾಹರ ಭಾವಚಿತ್ರಗಳು ರಾರಾಜಿಸುತ್ತಿವೆ. ಚಿತ್ರಗಳಲ್ಲಿ ಅಕ್ಕ ಮೆಹಂದಿ ಹಚ್ಚಿದ ಕೈಗಳನ್ನು ಕೊನೆಯದಾಗಿ ದಾರಿಹೋಕರಿಗೆಲ್ಲಾ ತೋರಿಸುತ್ತಿದ್ದಾಳೆ. ಅಕ್ಕನ ಮುಖದಲ್ಲಿ ಇನ್ನೂ ನಗು ಇದೆ. ಎಲ್ಲ ಕರುಳ ಬಳ್ಳಿಗಳನ್ನು ಕಳೆದುಕೊಂಡು ಅಕ್ಕ ದೂರ ಹೋಗಲು ಸಿದ್ದಳಾಗಿದ್ದಾಳೆ. ನನಗೆ ಅನಿಸಿದ ಹಾಗೆ ಜಗತ್ತಿನ ಕಠಿಣ ಪದ್ದತಿಗಳಿರುವುದು ಜೈನ ಸಮುದಾಯದಲ್ಲಿ.ದೀಕ್ಷೆ ಪಡೆದವರು ಸೂರ್ಯ ಮುಳುಗು ಮುಂಚೆ ನೀರು ಕುಡಿಯಬೇಕು. ಊಟ ಮಾಡಬೇಕು.ಎಷ್ಟು ದೂರವಾದರೂ ಕಾಲ್ನಡಿಗೆಯಲ್ಲೆ ಸಾಗಬೇಕು. ಮೈಮೇಲಿನ ಕೂದಲುಗಳನ್ನು ಕೈಯಿಂದ ಕಿತ್ತುಕೊಳ್ಳಬೇಕು. ಕೊನೆಗೆ ಸಲ್ಲೇಖನ ವೃತದ ಮೂಲಕ ಪ್ರಾಣ ಅಪರ್ಿಸಬೇಕು.ಅಬ್ಬಬ್ಬಾ.. ಕೇಳಿದರೆ ಉಸಿರುಗಟ್ಟಿದಂತಾಗುತ್ತದೆ. ಹೀಗೆ ಇದ್ದು ಪಡೆಯುವ ದುಃಖಕ್ಕಿಂತ ಕರೆದು ಪಡೆಯುವ ದುಃಖದಲ್ಲಿ ಅಕ್ಕನಿಗೆ ಖುಷಿ. ಅಕ್ಕನ ಸುತ್ತ ಯಾವ ಗೋಡೆಗಳಿಲ್ಲ. ಬಣ್ಣಗಳಿಲ್ಲ. ಇರುವುದೊಂದು ಭೂಮಿ. ಜೀವಿಗಳು.ಜಗದ ಸುಖಲೋಲುಪತೆಯನ್ನು ಅಕ್ಕ ಜಾಡಿಸಿ ಒದ್ದಿದ್ದಾಳೆ. ಮೇರೆಗಳನ್ನು ಕಿತ್ತೊಗೆದು ಅಹಿಂಸೆ ಕೊಡವಿಡಿದು ಪಾರಿವಾಳದ ಹಾಗೆ ಹಾರ ಹೊರಟಿದ್ದಾಳೆ. ಜೈನ ಸಮುದಾಯದ ಗುರುಗಳಿಂದ ದೀಕ್ಷೆ ಪಡೆದು ನಂತರ ಹುಟ್ಟಿದ ಊರಿಗೆ ಬರುವುದು 10 ವರ್ಷಕ್ಕೋ 20ವರ್ಷಕ್ಕೋ. ಅದು ಕಾಲ್ನಡಿಗೆಯಲ್ಲಿ. ಬಂದರೂ ಬರಬಹುದು ಇಲ್ಲದಿದ್ದರೆ ಇಲ್ಲ. ಸೋನಾಲ್ ನಾಹರ ಸಹೋದರಿಯರಾದ ಪ್ರಿಯಸ್ವಣರ್ಾಂಜನ ಶ್ರೀಜಿ 1995 ಫೆಬ್ರುವರಿ 13ರಂದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ, 2004ರಲ್ಲಿ ಪ್ರಿಯಶ್ರೇಷ್ಠಾಂಜನಾ ಶ್ರೀಜಿ ಆಂಧ್ರಪ್ರದೇಶದ ಆದೋನಿ ಸಮೀಪದ ಪೆದ್ದತುಂಬಲಂ ಗ್ರಾಮದ ಪಾಶ್ರ್ವಮಣಿ ದೇವಸ್ಥಾನದಲ್ಲಿ ದೀಕ್ಷೆ ಪಡೆದಿದ್ದರು. ಸದ್ಯ ಅಕ್ಕ ಸೋನಾಲ್ ನಾಹರ ಫೆ.15 .2009ರಂದು ದೀಕ್ಷೆ ಪಡೆಯುತ್ತಿದ್ದಾರೆ. ದೀಕ್ಷಾ ಸಮಾರಂಭಕ್ಕೆ ಇಡೀ ನಗರದ ಜೈನ ಸಮುದಾಯವೇ ಸಜ್ಜಾಗಿದೆ. ಈ ಬಗ್ಗೆ ಕಳೆದೆರಡು ದಿನಗಳ ಹಿಂದೆ ನಮ್ಮ ಪತ್ರಿಕೆಯಲ್ಲಿ ವರದಿ ಮಾಡಲು ಸಮಾರಂಭದ ಆಹ್ವಾನ ಪತ್ರಿಕೆ ಹಿಡಿದು ಅಕ್ಕನ ಮುಖ ನೋಡಿದಾಗ ಹನಿಗಳೆರಡು ಉದುರಿದವು. ನನ್ನ ಅಕ್ಕ,ತಂಗಿ ನೆನಪಾದರು.
-ಬಸವರಾಜ ಹಳ್ಳಿ
ಮಂಗಳವಾರ, ಫೆಬ್ರವರಿ 3, 2009
ಬದುಕು ಹಸಿರಾಗಿಸಿದ ಕುಡುಗೋಲು

ಬಸವರಾಜ ಹಳ್ಳಿ
ಗುರುವಾರ, ಜನವರಿ 29, 2009
ಒಂದು ಖಾಸಗಿ ಪತ್ರ
ಒಂದು ಖಾಸಗಿ ಪತ್ರ
ಪ್ರೀತಿಯ ಟ್ರೀ 5 ಪ್ರಕಾಶನದಅಣಾವ್ರಿಗೆ ನಮಸ್ಕಾರಗಳು
ತಮ್ಮ ಪ್ರಕಾಶನದಲ್ಲಿ ಹೊರತಂದಿರುವ ಥೇಟ್ ನನ್ನ ಗೆಳೆಯ ಕಾಪರ್ೆಂಟರ್ ಮಲ್ಲಿಯಂತಿರುವ ವಿ.ಆರ್.ಕಾಪರ್ೆಂಟರ್ರ ಕವನ ಸಂಕಲನ 5ನೇ ಗೋಡೆಯ ಚಿತ್ರಗಳು ನನ್ನ ಬಹುವಾಗಿ ಆಕಷರ್ಿಸಿತು. ಕಥೆ, ಕವನ, ಹನಿಗವನ ಹೀಗೆ ಸಾಹಿತ್ಯದ ಹರದಾರಿಯಲ್ಲಿ ಅಂಬೆಗಾಲಿಡುತ್ತಿರುವ ನಾನು ಈ ಕವನ ಸಂಕಲನವನ್ನು ನನ್ನ ಗುರುಗಳಾದ ಕಥೆಗಾರ ಕಲಿಗಣನಾಥ ಗುಡದೂರ ಅವರಿಂದ ಪಡೆದಿದ್ದೆ. ಅವರಿಂದ ಪಡೆದ ತಾಸೊಪ್ಪತ್ತಿನೊಳಗೆ ಕವನ ಸಂಕಲನದ ಒಪ್ಪ , ಓರಣವನ್ನು ಇಂಚಿಚು ಗಮನಿಸಿದೆ. ಏನೋ ಹೊಸತನ ಕಂಡಿತು. ಇದರಲ್ಲಿ ವಿ.ಎಂ.ಮಂಜುನಾಥರ ಕೈಚಳಕ ಢಾಳಾಗಿ ಕಂಡುಬಂತು. ಒಂದು ಉತ್ತಮ ಕವನ ಸಂಕಲನಕ್ಕೆ ಕಲೆಯ ಕೈ, ಖಚರ್ು ಮಾಡುವ ಕೈ, ಬರೆಯುವ ಕೈ ತ್ರಾಸುಪಟ್ಟಿರುವುದು ಓದಿ, ನೋಡಿ ಕಂಡುಕೊಂಡೆ. ಕವನ ಸಂಕಲನ ಸಿಕ್ಕ ದಿನದ ಮಧ್ಯಾಹ್ನವೇ ಪ್ರಕಾಶನದ ಹೊಣೆ ಹೊತ್ತಿರುವ ತಮಗೆ ಒಂದು ಪೋನು ಹೊಡೆದೆ. ಅಂದು ಉಡುಪು ತಯಾರಿಕೆ ಕಾಖರ್ಾನೆಯಲ್ಲಿ ಕೆಲಸದಲ್ಲಿದ್ದ ತಮಗೆ ಸ್ವಲ್ಪ ತೊಂದರೆ ಕೊಟ್ಟೆ ಅನಿಸುತ್ತೆ. ಒಂದೆ ಸಮನೆ ನನಗನಿಸಿದ್ದನ್ನು ನನ್ನ 8 ನಿಮಿಷ 10 ಸೆಕೆಂಡುಗಳ ಸಂಭಾಷಣೆಯಲ್ಲಿ ತಮಗೆ ತಿಳಿಸಿದೆ. ತಾವು ಈ ಸಮಯದಲ್ಲಿ ಭಾವುಕರಾಗಿದ್ದಂತೆ ಕಂಡುಬರುತ್ತದೆ. ತಾವು ನಡೆದು ಬಂದ..ನಡೆಯುತ್ತಲಿರುವ...ಮುಳ್ಳುಕಂಟಿಯ ದಾರಿಯ ಬಗ್ಗೆ ನನಗೆ ಹೇಳಿದ ಮೇಲೆ ಅರ್ಥವಾದದ್ದು. ನಾನು ಮೊದ ಮೊದಲು ತಮ್ಮ ಪ್ರಕಾಶನದಿಂದ ಇದೇ ಮೊದಲ ಕವನ ಸಂಕಲನವೇನು ಎಂದು ತಿಳಿದಿದ್ದೆ. ವಿ.ಎಂ.ಮಂಜುನಾಥರ ಬ್ರಾಂಡಿ ಕಥಾಸಂಕಲನ, ಉಗಮ ಶ್ರೀನಿವಾಸರ ಒಂದು ಬಟ್ಟೆ ಚೂರು ಕವನ ಸಂಕಲನ ಜೊತೆಗೆ ಇನ್ನೊಂದು ಸಂಕಲನ ತಂದಿರುವುದಾಗಿ (ಹೆಸರು ನೆನಪಿಲ್ಲ) ಹೇಳಿದಾಗ ಆಶ್ಚರ್ಯ ಚಕಿತನಾದೆ. ಉಡುಪು ಕಾಖರ್ಾನೆಯಲ್ಲೇ ದುಡಿದು ಕುಟುಂಬ ನಿರ್ವಹಣೆ ಜೊತೆಗೆ ಅದರಲ್ಲೇ ಹಣ ಉಳಿಕೆ ಮಾಡುತ ಈ ರೀತಿ ಸಾಹಿತ್ಯದ ಸೇವೆ ಮಾಡುತ್ತಿರುವ ನಿಮ್ಮಂತವರು ನಮಗೆ ಸ್ಪೂತರ್ಿಯ ಸೆಲೆ. ನಾನು ಓದಿದ್ದು ಬಿ.ಎ.ಕಾಲೇಜು ಬಿಟ್ಟು ಮೂರು ವರ್ಷವಾಯ್ತು. ನನ್ನ ವಯಸ್ಸಿನ ಗೆಳೆಯರು ಸಂಬಳ, ಗಿಂಬಳ ಅಂತ ಏನೇನೂ ಎಣಿಸುತ್ತಿದ್ದಾರೆ. ಓದುವಾಗ ಮನೆಯವರ ಹಸಿವು ಕಾಡಿಸಿತು. ಮತ್ತೆ ಓದುಬೇಕು ಎನ್ನುವಾಗ ಮೀಸೆ, ಆಸೆ ಎಲ್ಲ ಚಿಗುರಿದೆ ದುಡಿದು ದುಡಿದು ಹಣ್ಣಾಗಿರುವ ಅವ್ವನ ಮುಖ, ಹೊಲದಲ್ಲಿ ಗಳೇವು ಹೊಡೆದು ಹೊಡೆದು ಸಾಕಾಗಿರವ ಅಪ್ಪ ಇನ್ನು ಓದುತ್ತಿರುವ ತಮ್ಮ, ತಂಗಿ ಕಣ್ಣು ಕಾಣದ ದೊಡ್ಡವ್ವ ಎಲ್ಲರನ್ನೂ ದಿಟ್ಟಿಸಿ ನೋಡಿದರೆ ಯಂತ್ರದಂತೆ ದುಡಿದು ರೊಕ್ಕ ಎಣಿಸುತ್ತ ಇರಬೇಕೆನಿಸುತ್ತದೆ. ಒಬ್ಬ ಅಣ್ಣನಂತೆ, ಅಷ್ಟಕ್ಕೂ ನನ್ನ ಕಷ್ಟಕ್ಕೂ ಪಾಲುದಾರರಂತೆ ಸದಾ ಕೈ ಹಿಡಿದು ನಡೆಸುತ್ತಿರುವ, ಬೆಳಕಿನ ಪ್ರತಿರೂಪದಂತಿರುವ ಗುರು ಕಲಿಗಣನಾಥ ಗುಡದೂರರು ತಮ್ಮ ಸುದ್ದಿಬಿಂಬ ಪತ್ರಿಕೆಯಲ್ಲಿ ವರದಿಗಾರಿಕೆಯನ್ನು ನೀಡಿ , ತೀಡಿ ನನಗೊಂದಿಷ್ಟು ಬದುಕಲು ದಾರಿ ಮಾಡಿಕೊಟ್ಟಿದ್ದಾರೆ. ಬರುವ 2500ರೊಳಗೆ ಮನೆಗೊಂದಿಷ್ಟು ತಮ್ಮನ, ತಂಗಿಯ ಓದಿಗೊಂದಿಷ್ಟು ಖಚರ್ು ಮಾಡುತ್ತಾ ಪತ್ರಿಕೆಯ ತಾಲ್ಲೂಕ ಮಟ್ಟದ ಪತ್ರಿಕೆಯ ವರದಿಗಾರಿಕೆಯಲ್ಲಿ ಕಾಲ ನೂಕುತ್ತಿರುವೆ. ಇದಕ್ಕೂ ಮುಂಚೆ ರಾಯಚೂರಿನ ಜಿಲ್ಲಾ ಮಟ್ಟದ ಪತ್ರಿಕೆ ಸುದ್ದಿಮೂಲಪತ್ರಿಕೆಯಲ್ಲಿ ಗುರುಗಳ ಅಣತಿಯಂತೆ ಕೆಲಸ ಮಾಡಿದೆ. ಆದರೆ ಅಲ್ಲಿ ಕೇವಲ 2000ಕ್ಕೆ ದಿನದ 18ಗಂಟೆ ಒಂದು ವರ್ಷವಿಡೀ ದುಡಿದೆ. ಕೊನೆಗೆ ಸಾಕಾಗಿ ಹೇಳದೆ ಕೇಳದೆ ಊರಿನ ಹಿಡಿದೆ. ಹೊಲದಲ್ಲಿ ಕಬ್ಬಕ್ಕಿ ಓಡಿಸಿ ಓಡಿಸಿ ಸಾಕಾಗಿ ಅಪ್ಪ ಬೈಯ್ದನೆಂದು ಮುನಿಸಿಕೊಂಡು ದುಡಿದೇ ತೀರುತ್ತೇನೆಂದು ಬ್ಯಾಗಿಡಿದು 2007ರಲ್ಲಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಗಾಮರ್ೆಂಟ್ ಪ್ಯಾಕ್ಟರಿ ಶಾಹಿ ಎಕ್ಸ್ಪೋಟರ್್ ಲಿಮಿಟೆಡ್ ಬ್ರಾಂಚ್ ನಂ.1ರಲ್ಲಿ ಸ್ನೇಹಿತನ ರೊಂ ನಲ್ಲಿದ್ದು 3 ತಿಂಗಳು ಕಂಪ್ಯೂಟರ್ ವಿಭಾಗದಲ್ಲಿ ದುಡಿದೆ. ಪ್ಯಾಕ್ಟರಿಯೊಳಗಿನ ಜಗಳ, ದಬಾಯಿಸುವಿಕೆಗೆ ಒಮ್ಮೊಮ್ಮೆ ಮೂಕಪ್ರೇಕ್ಷಕನಾಗುತ್ತಿದ್ದ. ನಮ್ಮಂತವರಿಗೆ ಇದು ಊರು ಅಲ್ಲ. ಇಲ್ಲಿನ ಕೆಲಸವೂ ಚಲೋ ಅಲ್ಲ ಎಂದ ಪೇಮೆಂಟು, ಓಟಿ ಪೇಮೆಂಟು ಜೊತೆಗೆ ಗೆಳೆಯನಿಗೂ ಹೇಳದೆ ಕೇಳದೆ ಓಡಿ ಬಂದವನು. ಸುದ್ದಿಬಿಂಬ ಪತ್ರಿಕೆಯಲ್ಲಿ ಸುರುಗಿಕೊಂಡು. ವರದಿಗಾರಿಕೆ, ಪೇಜಿನೇಷನ್ ಹೀಗೆ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ನಾನು ಹೇಳಿಕೊಂಡಿದ್ದು ಸ್ವಲ್ಪ ಅತಿಯಾದರೆ ಕ್ಷಮಿಸಿ. ತಮ್ಮ ಪ್ರಕಾಶನದ 5ನೇ ಗೋಡೆಯ ಚಿತ್ರಗಳು ಕವನ ಸಂಕಲನದ ಹತ್ತಾರು ಪ್ರತಿಗಳನ್ನಾದರು ಸ್ನೇಹಿತರಿಗೆ ಹೇಳಿ ಕೊಂಡು ಓದಲು ಹೇಳುತ್ತೇನೆ. ವಿ.ಎಂ.ಮಂಜುನಾಥರ ಬ್ರಾಂಡಿ ನೀರಿನಂತೆ ಖಚರ್ಾಗಲಿ, ವಿ.ಆರ್.ಕಾಪರ್ೆಂಟರ್ರ 5ನೇ ಗೋಡೆಯ ಚಿತ್ರಗಳು ಬಣ್ಣ ಮೆತ್ತಿಕೊಂಡು ನಳ ನಳಿಸಲಿ, ಉಗಮ ಶ್ರೀನಿವಾಸರ ಒಂದು ಬಟ್ಟೆ ಚೂರು ತಾನ್ಗಟ್ಟಲೆ ಬಟ್ಟೆಯಾಗಲಿ ಎಂದು ಆಶಿಸುತ್ತೇನೆ. ಆತ್ಮೀಯ ಅಣ್ಣನವರಾದ ವಿ.ಎಂ.ಮಂಜುನಾಥರಿಗೆ ಕೇಳಿಕೊಳ್ಳುವುದೇನೆಂದರೆ ತಮ್ಮ ಈ-ಮೇಲ್ಗೊಂದು ಸಣ್ಣದೊಂದು ಪತ್ರ ಒಗೆದಿರುವೆ. ಈ ವಿಷಯ 5ಟ್ರೀ ಅಣ್ಣನಿಗೆ, ವಿ.ಆರ್.ಕಾಪರ್ೆಂಟರ್ ಕಿವಿಗೆ ಹಾಕಿ. ಕೇವಲ ನಮ್ಮ ಪತ್ರಿಕೆ ಸುದ್ದಿಬಿಂಬಕ್ಕೆ ವಿಶೇಷ ವರದಿ, ಜಿಲ್ಲಾ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ನಾನು.ಈಗೀಗ ಕಥೆ, ಕವನದ ಜಾಡು ಹಿಡಿದಿದ್ದೇನ.
ಬುಧವಾರ, ಜನವರಿ 28, 2009
ಸಣ್ಣ ಕವನ
ಮಹಲುಗಳ
ಎತ್ತರವ ನೊಡಿ
ಕಣ್ಣುಗಳು ನೊಯ್ದವು
ಗುಡಿಸಲುಗಳ
ಚಪ್ಪರವ ನೋಡಿ
ಕಣ್ಣುಗಳು ತೊಯ್ದವು
- ಬಸವರಾಜ ಹಳ್ಳಿ


