ಶನಿವಾರ, ಫೆಬ್ರವರಿ 18, 2012

ಭಾನುವಾರ, ನವೆಂಬರ್ 20, 2011

ಭಾನುವಾರ, ಅಕ್ಟೋಬರ್ 16, 2011

ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆ -2011ಸಹೃದಯ ಕವಿ ಬಸವರಾಜ ಹೃತ್ಸಾಕ್ಷಿ ಸಿರವಾರ ಅವರ
'ಒಬ್ಬ ಅವ್ವ ಇರಲಿ, ಈ ಬಿಸಿಲ ಕೂಸುಗಳಿಗೆ' ಕವನ ಈ ಬಾರಿಯ ಪ್ರತಿಷ್ಠಿತ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆಯಲ್ಲಿ (2011) ಪ್ರಥಮ ಬಹುಮಾನ ಪಡೆದಿದೆ. ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಸಿರವಾರದಲ್ಲಿ ಬಸವರಾಜ ಹೃತ್ಸಾಕ್ಷಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಎರಡನೇ ಬಹುಮಾನ ಆರೀಫ್ ರಾಜಾ ಅವರ " ಬುಖರ್ಾ ಹೌಸಿನ ಮುಂದೆ' ಕವನಕ್ಕೆ ದೊರೆತಿದೆ. ಈ ಬಾರಿ ಪ್ರಥಮ ಮತ್ತು ದ್ವಿತೀಯ ಬಹುಮಾನ ರಾಯಚೂರು ಜಿಲ್ಲೆಗೆ ದಕ್ಕಿರುವುದು ವಿಶೇಷ. ಈ ಹಿಂದೆಯೇ ಆರೀಫ್ ರಾಜಾ ಅವರ ಕವನ "ಜಂಗಮ ಪಕೀರನ ಜೋಳಿಗೆ'ಗೆ ಪ್ರಥಮ ಸ್ಥಾನ ದೊರೆತಿದ್ದನ್ನು ನಾವು ಸ್ಮರಿಸಬಹುದು.
ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗದೊಂದಿಗೆ ಜಿಲ್ಲೆಯ ಕೀತರ್ಿಯನ್ನು ಹೆಚ್ಚಿಸಿರುವ ಬಸವರಾಜ ಹೃತ್ಸಾಕ್ಷಿ ಸಿರವಾರ ಹಾಗೂ ಆರೀಫ್ ರಾಜಾ ಅವರಿಗೆ
ಹೃದಯಪೂರ್ವಕ ಅಭಿನಂದನೆಗಳು.
- ಪಿ.ಲಂಕೇಶ್ ಬಳಗ, ಸಿಂಧನೂರು (9880757380)

ಮಂಗಳವಾರ, ಸೆಪ್ಟೆಂಬರ್ 20, 2011

ಬುಧವಾರ, ಜನವರಿ 12, 2011


ಕವನ : ತಂಗಿ ನೀಲು
ತಂಗಿ ನೀಲು
ನಿನ್ನ ಮರಣದ ವಾತರ್ೆ
ಹಸಿದ ಹೊಟ್ಟೆಯ ಹೊತ್ತು ಸತುವಿಲ್ಲದ ಕಾಲುಗಳಲ್ಲಿ ನಡೆಯುತ್ತಿದ್ದೆ
ಮನುಷ್ಯರೆಲ್ಲರೂ ಮಂದಿರ,ಮಸೀದಿಗೆ ಎಡೆ ಹಿಡಿದು ಹೊರಟಿದ್ದರು
ಕೆಂಡದಾ ಮ್ಯಾಲೆ ಚಿಕ್ಕೆಗಳ ಎಣಿಸುತ ಮಲಗಿದ್ದವಳಿಗೆ
ಉರಗದ ನಾಲಿಗೆ ಬಡಿಯಿತೇ
ಬೂಜುಗಟ್ಟಿದ ಚರ್ಮ ಕಿತ್ತುಕೊಳ್ಳುತ್ತಲೇ
ಉಂಗುಟ ಹರಿದ ಚಪ್ಪಲಿಗೆ ಹೊಟ್ಟೆಯ ಸಿಟ್ಟು ಚಿಮ್ಮುತ್ತದೆ
ನಿನ್ನ ನೆನೆದಾಗಲೆಲ್ಲಾ ನೆನೆಯುತ್ತಲೆ ಹೋಗುತ್ತೇನೆ

ಅವ್ವನಮುರಿದ ಪೆಟಾರಿಯಲಿ ಮುಚ್ಚಿಟ್ಟ ಅಂಕಪಟ್ಟಿಗಳು
ಗೆದ್ದಲಗಳಿಗೆ ದಿನದೂಟ
ಹಣೆಗಚ್ಚಿಕೊಂಡು ತಿರುಗಿದರೆ ಕಸದ ಬುಟ್ಟಿಯೆಡೆಗೆ ತೋರುಬೆರಳು
ತೂತುಬಿದ್ದ ಬೊಕುಣದಲಿ ಗಾಂಧಿತಾತ ನಗುತ್ತಾನೆಯೇ ?
ನಿನಗೆ ಲಂಗ ಕೊಳ್ಳಲು ಆಕಾಶ ನೋಡಿದ ನಾನು ಶಾಪ ಹಾಕಿಕೊಂಡೆ
ಹಿಂಗಾರು ಮಳೆಗೆ ಗುಡಿಸಲು ತುಂಬ ಸಾವಿರ ನಲ್ಲಿಯ ಆರ್ಭಟ
ತೊಯ್ದ ಬಟ್ಟೆಯಲಿ ನಿಂತ ಮುದ್ದು ಭಾವಚಿತ್ರ ಹಸಿಯಾಗಿದೆ
ಜಗಲಿ ಮ್ಯಾಲಿನ ಮೂರೂ ಫೋಟೋ ಕಟ್ಟುಗಳು ಹೊಗೆಯಾಗಿವೆ
ಅಪ್ಪ ಚುಟ್ಟಾ ಸೇದುತ್ತಲೆ ನಿನ್ನ ಆತ್ಮದ ಕುಲಾವಿ ನೇವರಿಸುತ್ತಿದ್ದಾನೆ
ಹಂಚಿಟ್ಟ ಅವ್ವ ಧ್ಯಾನದಲೆ ರೊಟ್ಟಿಯ ಬದಲು ಕೈಯಿಟ್ಟಿದ್ದಾಳೆ

ಸಾವಿರ ಚೇಳು, ಉರಗ ಕಚ್ಚಿದರೂಪಾಪಿ ಬದುಕಿದ್ದೇನೆ
ಕೊನೆಯ ಮುಖ ನೋಡದೆ,
ನಾಲಿಗೆ ಹರಿದ, ಸೀಳು ಮೂಗಿನ, ಗಾಳಿಗೆ ತೇಲುವ ಮನುಷ್ಯರೇ ಬೇಕು
ಜಗದ ಅಪಮಾನಗಳನ್ನು ಹೊತ್ತು ತಿರುಗಲು
ನಿನ್ನ ಚೆಲುವಿಗೆ ಬೆಂಕಿ ಹಚ್ಚಿದ ಖೂಳರು ನನ್ನ ಮೂರು ಜನುಮದ ಯಜಮಾನರು
ಸೆಟೆದ ನಾಲಿಗೆ ಮಾತೆತ್ತಿದರೆ ತಿರುಗು ಯಂತ್ರಕೆ ಲಕ್ಷ ತುಕಡಿಗಳು
ನಾನು ಮಾತನಾಡುವ ಮೂಖ, ನೋಡುವ ಕುರುಡ, ಕೇಳುವ ಕಿವುಡ

ಮಹಲುಗಳ ಓಟಕೆ ಜೋಪಡಿ ಪಟ್ಟಿಗಳು ನರಳಿವೆ
ನಿನ್ನೆ ಕುಳಿತು ಉಂಡ ಜಾಗೆಯಲಿ ಪಿಲ್ಲರ್ಗಳೆದ್ದಿವೆ
ಬದುಕು ಕಪ್ಪೆ ಆಟ ನಿದ್ದೆಗಳನು ಬಿಡದು ರೋಲರ್ಗಳ ಸದ್ದು
ಜೀವ ಹಿಂಡುವ ಲೋಕಕೆ ಬಂದ ತಂಗಿ ಕ್ಷಮೆಯಿರಲಿ
ಸುಡುವ ಕಡಾಯಿಯಲಿ ಬಿದ್ದ ಕೈಗೆ ಸ್ಪರ್ಶ ಜ್ಞಾನವಿಲ್ಲ
ನಾಲ್ಕೆ ನಾಲ್ಕು ಹನಿ ಹನಿಸುವ ಶಕ್ತಿ ಕಣ್ಣುಗಳಿಗೆ
ಕಬರಸ್ತಾನ, ಸುಡುಗಾಡು ಸುತ್ತುತ್ತಲಿದ್ದೇನೆ
ಬೂದಿಯಾದರೂ ಸಿಕ್ಕೀತು ಎದೆಗಪ್ಪಿಕೊಳ್ಳಲೆಂದು

ಬಯಲ ಮೂರು ಹೊಲೆಗುಂಡುಗಳು
ಸುರಿದ ಬಿಸಿಲಿಗೆ ಅನ್ನ ಬೇಯುತ್ತಿದೆ
ಗುಂಪಲ್ಲಿ ಊರ ಜಾತ್ರೆಯ ಸಡಗರ
ಬಾಯಿಗೆ ಇಷ್ಟಿಷ್ಟು ತುತ್ತಿನ

ಸಿಲ್ವರ್ ತಾಟಿಡಿದ ಹರಿದ ಲಂಗದ ತಂಗಿ ಮತ್ತೆ ಕಂಡಳು
ದಾರಿ ಹೋಕರು ಬರುವ ಮುಂಚೆ
ದೂರ ಸಾಗಬೇಕಾಗಿದೆ
ತಂಗಿಗೊಂದು ಹೊಸ ಲಂಗ ತರಲು
ಮೈ ಉರಿಗೊಳಿಸಬೇಕಾಗಿದೆ ಕಾವಲಾಗಲು...
- ಬಸವರಾಜ ಹಳ್ಳಿ, ಹಸಮಕಲ್ಭಾನುವಾರ, ಜೂನ್ 6, 2010

ಗ ಜ ಲ್ಮನದ ಮೂಲೆಯೊಳಗೆ ಬಚ್ಚಿಟ್ಟೆ ನೂರು ಕನಸುಗಳ
ಸನಿಹವಿದ್ದು ಒಮ್ಮೆಯೂ ನೀ ಒಳಹೊಕ್ಕು ನೋಡಲಿಲ್ಲ.


ಪ್ರೀತಿ ರಕುತದಿ ಬರೆದೆ ಸಾವಿರ ಸಾವಿರ ಓಲೆಗಳ
ಕೈಗೆಟುಕಿದರೂ ಒಮ್ಮೆಯೂ ತಿರುವಿ ನೋಡಲಿಲ್ಲ.


ನಿನ ಅರಸಿ ಮರಭೂಮಿಯಲಿ ಬರಿಗಾಲಲಿ ಓಡಿದೆ
ಅಂಗಾಲಲಿ ಎದ್ದ ಗುಳ್ಳೆಗಳ ನೀ ಕಣ್ಣೆತ್ತಿ ನೋಡಲಿಲ್ಲ.


ಗೋಲಗುಂಬಜಿನಲಿ ನಿನ ಹೆಸರ ಸಾರಿ ಸಾರಿ ಕೂಗಿದೆ
ಏಳೇಳು ಬಾರಿ ಪ್ರತಿಧ್ವನಿಸಿದರೂ ನೀ ಕೇಳಲೇ ಇಲ್ಲ

ನಗುನಗುತಲಿ ಏನೂ ಹೇಳದೆ ಕೇಳದೆ ಹೋದೆಯಲ್ಲ
ನಿನ ಧ್ಯಾನದಲೇ ಕುಣಿಯೊಳಗಿದ್ದ ನನ್ನ ನೀ ನೋಡಲಿಲ್ಲ.

- ಬಸವರಾಜ ಹಳ್ಳಿ, ಹಸಮಕಲ್

ಶುಕ್ರವಾರ, ಏಪ್ರಿಲ್ 9, 2010

ಲಂಕೇಶ ಎಂಬ ಮಹಾಮಳೆ


ತಮ್ಮ ಸಮಕಾಲೀನ ಕಾಲ ಘಟ್ಟವನ್ನು ಬಹುವಾಗಿ ಪ್ರಭಾವಿಸಿದ ಪಾಳ್ಯದ ಲಂಕೇಶ ಮಹಾಮಳೆಯೇ ಸರಿ. ಗುಡುಗು, ಸಿಡಿಲಿನಿಂದ ಆರ್ಭಟಿಸಿ ಎಡೆಬಿಡದೆ ಧಾರಾಕಾರವಾಗಿ ಸುರಿದು ಊರ ಕೊಳಕು, ಕೊಚ್ಚೆ ಎಲ್ಲವನ್ನು ತೊಳೆದು, ಸಾಹಿತ್ಯದ ಹುಲುಸು ಬೆಳೆ ಬೆಳೆದವರು.ನೇರ, ನಿಷ್ಠುರತೆಯ ಪ್ರತಿರೂಪ. ಮಹಾಮಳೆಯಲ್ಲಿ ಅನೇಕರು ಮಿಂದೆದ್ದು ಹಿತಾನುಭವ ಅನುಭವಿಸಿದ್ದಾರೆ. ರಭಸಕ್ಕೆ ಕೆಲವರು ಮಳೆಯಲ್ಲೇ ಬೆವತಿದ್ದಾರೆ. ಲಂಕೇಶ ಮೇಷ್ಟ್ರು ಹೋಗಿ ಇಂದಿಗೆ ಹತ್ತು ವರ್ಷ ಒಂದು ತಿಂಗಳು ಎರಡು ದಿನ ಸಂದಿವೆ. ಆದರೂ ಇನ್ನೂ ಇದ್ದಾರೆನ್ನುವ ಮನೋಸ್ಥಿತಿ ಎಲ್ಲರಲ್ಲಿದೆ. ಅವರ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಚಿಂತಕರು ಅವರ ಚಿಂತನೆಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿರುವುದೇ ಅದಕ್ಕೆ ಸಾಕ್ಷಿ. ಪತ್ರಿಕೋದ್ಯಮ ಹಾಗೂ ಸಾಹಿತ್ಯದ ದಂತಕತೆ ಲಂಕೇಶ ಅವರ ವಿಚಾರಧಾರೆಗಳು ನಾಡಿನ ಬಹುತೇಕರನ್ನು ಪ್ರಭಾವಿಸಿದ್ದರಲ್ಲಿ ಎರಡು ಮಾತಿಲ್ಲ. ಅವರ ಮಾತಿಗೆ ಮತ್ತು ಲೇಖನಿಗ ಒಂದು ತೂಕವಿತ್ತು.ಎಂತವರನ್ನು ಎದುರು ಹಾಕಿಕೊಳ್ಳುವ ಅದಮ್ಯ ಧೈರ್ಯ.ಅದನ್ನು ಎಂದೂ ದುರುಪಯೋಗಪಡಿಸಿಕೊಂಡವರಲ್ಲ. ಅಸಹಾಯಕರ ಪರ ಮಿಡಿಯುವ ಹೃದಯವಿತ್ತು. ಲಂಕೇಶರು ಅನೇಕರನ್ನು ತೀರಾ ತೀರಾ ಹತ್ತಿರಕ್ಕೆ ಬಿಟ್ಟುಕೊಂಡಿದ್ದಾರೆ. ಎಡಬಿಡಂಗಿತನ ತೋರಿಸಿದಾಗ ಬಹುದೂರಕ್ಕೆ ಅಟ್ಟಿದ್ದಾರೆ. ಯಾರ ಮುಲಾಜು, ಓಲೈಕೆಗೆ ಮಣಿದವರಲ್ಲ. ಅವರಿಂದ ದೂರ ಸರಿದವರೆಲ್ಲಾ ಇಂದಿಗೂ ಲಂಕೇಶ ರನ್ನು ಗುರುಸ್ಥಾನದಲ್ಲಿಟ್ಟಿರುವುದೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. 1980ರ ದಶಕದಲ್ಲಿ ಆರಂಭವಾದ ಲಂಕೇಶ ಪತ್ರಿಕೆ ಮೂಲಕ ಅವರು ಮಾಡಿದ ಸಾಮಾಜಿಕ ಕ್ರಾಂತಿ ಸಣ್ಣದಲ್ಲ.ಸಾಮಾನ್ಯ ಜನರ ನೋವು ವ್ಯಕ್ತಪಡಿಸಲು ಪತ್ರಿಕೆ ವೇದಿಕೆಯಾಯಿತು.ಸಕರ್ಾರವನ್ನು ನಡೆಸುವವರ ಬಗ್ಗೆ ಜನರಲ್ಲಿದ್ದ ಅಂಧ ಮನೋಭಾವನೆಯನ್ನು ಮೂಲೋತ್ಪಾಟನೆ ಮಾಡಿ, ಪ್ರಶ್ನಿಸುವ ಎಚ್ಚರ ಪ್ರಜ್ಞೆಯನ್ನು ಬೆಳೆಸಿದವರಲ್ಲಿ ಲಂಕೇಶರು ಮೊದಲಿಗರು. ರಾಜಕಾರಣಿಗಳ ಹುಳುಕುಗಳನ್ನು ಬಟಾಬಯಲುಗೊಳಿಸಿ ಜನರ ಧ್ವನಿಯಾಗಿ ನಿಲ್ಲುತ್ತಿದ್ದ ಅವರು ಒಂದೊಮ್ಮೆ ಸಕರ್ಾರವನ್ನು ಎದುರು ಹಾಕಿಕೊಂಡಿರುವ ಪ್ರಸಂಗಗಳು ನಡೆದಿವೆ.ಯಾರ ಬೆದರಿಕೆ, ಅಂಜಿಕೆಗೆ ಹೆದರದೆ ಆನೆ ನಡೆದದ್ದೆ ದಾರಿ ಎನ್ನುವಂತೆ ಮುನ್ನುಗ್ಗಿದವರು. ಪ್ರತಿವಾರವೂ ಲಂಕೇಶ ಪತ್ರಿಕೆಯನ್ನು ಒಪ್ಪಹೋರಣದಿಂದ ರೂಪಿಸುತ್ತಿದ್ದರು. ರಾಜಕೀಯಕ್ಕೆ ಸ್ವಲ್ಪ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದರೂ ಎನ್ನುವುದನ್ನು ಬಿಟ್ಟು ಅಂಕಣ ಬರಹಗಳು, ಯುವ ಬರಹಗಾರರ ಲೇಖನಗಳು, ಕವನ ಹಾಗೂ ಕತೆ ಹತ್ತ್ತು ಹಲವು ತೆರೆನಾಗಿ ರಂಗು ರಂಗಿನಿಂದ ಪತ್ರಿಕೆ ಹೊರಬರುತ್ತಿತ್ತು. ಪತ್ರಿಕೆ ಲಂಕೇಶರಿಗೆ ಮಗುವೇ ಆಗಿತ್ತು. ಪತ್ರಿಕೋದ್ಯಮದಲ್ಲಿ ಬೀಡು ಬೀಸಾಗಿ ನಡೆದಷ್ಟೆ ವೇಗವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದರು. ಆಂಗ್ಲ ಉಪನ್ಯಾಸಕರಾಗಿದ್ದ ಲಂಕೇಶರು ಇಂಗ್ಲೀಷ್ ಬರಹಗಾರರನ್ನು ಅಪಾರವಾಗಿ ಓದಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಬರೆದ ಅವರ ಅನೇಕ ಕಥೆಗಳು ಕನ್ನಡ ಸಾಹಿತ್ಯ ಲೋಕ ಹೊಸ ದಾರಿಯಲ್ಲಿ ಪಯಣಿಸುವಂತೆ ಮಾಡಿತು ಎನ್ನುವುದರಲ್ಲಿ ಸಂದೇಹವಿಲ್ಲ. ಅವರ ಮೊದಲ ಕಥಾ ಸಂಕಲನ ಕೆರೆಯ ನೀರನು ಕೆರೆಗೆ ಚೆಲ್ಲಿ 1963ರಲ್ಲಿ ಪ್ರಕಟವಾಯಿತು. 1964ರಲ್ಲಿ ಅವರ ನಾಟಕಗಳಾದ ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ ಹಾಗೂ ತೆರೆಗಳು ಪ್ರಕಟಗೊಂಡವು. ಹಾಗೂ ರಂಗದ ಮೇಲೂ ಅಭಿನಯಿಸಲ್ಪಟ್ಟವು. ಕಲ್ಲು ಕರಗುವ ಸಮಯ, ನಾನಲ್ಲ, ಉಮಾಪತಿಯ ಸ್ಕಾಲರ್ಷಿಪ್ ಯಾತ್ರೆ,ಉಲ್ಲಂಘಟನೆ ಮತ್ತು ಮಂಜು ಕವಿದ ಸಮಯ ಇವರ ಕಥಾ ಸಂಕಲನಗಳು. ಬಿರುಕು, ಮುಸ್ಸಂಜೆಯ ಕಥಾ ಪ್ರಸಂಗ ಮತ್ತು ಅಕ್ಕ ಕಾದಂಬರಿಗಳು. ಟೀಕೆ-ಟಿಪ್ಪಣೆ ಅಂಕಣ ಬರಹಗಳ ಸಂಗ್ರಹ. ಕಲ್ಲು ಕರಗುವ ಸಮಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಥಾ ಸಂಕಲನ. ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅನೇಕ ಸಾಹಿತಿಗಳನ್ನು ಪ್ರಭಾವಿಸಿದರು. ಅವರ ಪ್ರಭಾವಕ್ಕೊಳಗಾದ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಹುಮುಖ ಪ್ರತಿಭೆ ಹೊಂದಿದ್ದ ಲಂಕೇಶರಿಗೆ ಕನ್ನಡ ಚಿತ್ರರಂಗಕ್ಕೆ ಸದಬಿರುಚಿಯ ಚಿತ್ರಗಳನ್ನು ಕೊಟ್ಟ ಕೀತರ್ಿ ಸಲ್ಲುತ್ತದೆ. ಅನುರೂಪ, ಖಂಡವಿದಕೊ ಮಾಂಸವಿದೆ ಕೊ, ಎಲ್ಲಿಂದಲೊ ಬಂದವರು, ಚಲನಚಿತ್ರಗಳನ್ನು ನಿದರ್ೇಶಿಸಿ ಸೈ ಎನಿಸಿಕೊಂಡರು. ಪಲ್ಲವಿ ಚಲನಚಿತ್ರಕ್ಕೆ ಕೇಂದ್ರ ಸಕರ್ಾರದ ಅತ್ಯುತ್ತಮ ನಿದರ್ೇಶಕ ಪ್ರಶಸ್ತಿಯೂ ಬಂತು. ಯು.ಆರ್. ಅನಂತಮೂತರ್ಿ ಅವರ ಕಾದಂಬರಿ ಆಧಾರಿತ ಸಂಸ್ಕಾರ ಚಿತ್ರದಲ್ಲಿ ನಾರಾಯಣಪ್ಪನ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗಳಿಸಿದ್ದು ಈಗ ಇತಿಹಾಸ. ಎಲ್ಲಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಲಂಕೇಶ ಕ್ರೀಯಾಶೀಲತೆ ಎಂತಹದ್ದು ಎಂದು ಅವರ ಹುಳಿಮಾವಿನ ಮರ ಓದಿದಾಗ ತಿಳಿಯುತ್ತದೆ. ಏನಾದರೂ ಲಂಕೇಶರಿಗೆ ಲಂಕೇಶರೆ ಸಾಟಿ
- ಬಸವರಾಜ ಹಳ್ಳಿ, ಹಸಮಕಲ್