ಬುಧವಾರ, ಮಾರ್ಚ್ 11, 2009

ತಾಯಿಯಂತ ಅಣ್ಣ ನಾಗತಿಹಳ್ಳಿ ರಮೇಶಣ್ಣ (ಅವ್ವಣ್ಣಿ)

ಅಣ್ಣನ ಮುಖದಲ್ಲಿ ಸದಾ ನಗು.ಮಾತಿನಲ್ಲಿ ಅವ್ವನ ಕಕ್ಕುಲಾತಿ.ನೀಲಗಿರಿ ಮರದ ಪರ್ವತಗಳ ಕಡೆಯಿಂದ ಬಿಸಿಲೂರ ಕಡೆಯವರೆಗೂ ನಿಂತಲ್ಲಿ ನಿಲ್ಲದೆ, ಕುಂತಲ್ಲಿ ಕೂಡದೆ ಸದಾ ಜಲಪಾದಂತೆ ಹರಿದು ತಾಯಿಪ್ರೀತಿ ಹಂಚುತ್ತಾ ನೊಂದ ಜೀವಗಳಿಗೆ ಹಗಲನ್ನೆರಡು ತಾಸು ಮಿಡಿಯುವ ಜೀವವದು. ತನ್ನ ಸ್ವಸಾಮಥ್ರ್ಯದಿಂದ ನೋಡು ನೋಡುತ್ತಲೇ ಏಕಪ್ಯಾಂಟ್ನಿಂದ ಸಾವಿರು ಕೋಟುಗಳನ್ನು ಕೊಳ್ಳಬಲ್ಲಷ್ಟು ಎತ್ತರಕ್ಕೆ ಏರಿದ ಅಣ್ಣನಿಗೆ ಬದುಕಿನಲ್ಲಿ ಸಪ್ಪಗೆ ಸಾವಿರ ವರ್ಷ ಬದುಕಿದರೂ ಅರ್ಥವಿಲ್ಲ. ಏನಾದರೂ ಸಪ್ಪಳ ಮಾಡಿ ಸಾಧಿಸಿ ತೋರಿಸಬೇಕು. ಜೀವಂತ ದೇವರು ಅವ್ವನಿಗೆ ಹೆಸರು ತರಬೇಕೆನ್ನುವ ತುಡಿತ. ತಾಯಿ ಕಕ್ಕುಲಾತಿಯ ನಾಗತಿಹಳ್ಳಿ ರಮೇಶಣ್ಣನ ಕುರಿತು ನನ್ನ ಗುರುಗಳಾದ ಕಲಿಗಣನಾಥ ಗುಡದೂರು ಅವರಿಂದ ಕೇಳಲ್ಪಟ್ಟಿದ್ದೆ. ಆದಾದ ವಾರೊಪ್ಪತ್ತಿನಲ್ಲಿ. ಅಣ್ಣ ಸಿಂಧನೂರಿಗೆ ಬಂದೆಬಿಟ್ಟರು. ಅವರನ್ನು ಮೊದಲ ಬಾರಿಗೆ ಭೇಟಿಯಾದೆ. ಅಣ್ಣನ ಸ್ಪೂತರ್ಿದಾಯಕ ಮಾತುಗಳು,ಅಪರಿಚಿತರನ್ನು ಕ್ಷಣಮಾತ್ರದಲ್ಲಿ ವಷರ್ಾನುಗಟ್ಟಲೆ ಅವರೊಂದಿಗೆ ಇದ್ದವರೇನೋ ಎನ್ನುವಂತೆ ಆತ್ಮೀಯವಾಗಿ ಕಾಣುವಪರಿ ನನಗೆ ಆಶ್ಚರ್ಯ ಮೂಡಿಸಿತು. ಅಣ್ಣ ಅವ್ವನಿಗಾಗಿ ಬರೆದ ಸಮುದ್ರ ಮತ್ತು ಮಳೆಯನ್ನು ಹಿಡಿದು ಕುಳಿತರೆ ಸದಾ ಪಾದರಸದಂತೆ ಜಗದವ್ವನೊಡಲಲ್ಲಿ ಅಲೆಮಾರಿ ಅವ್ವಣ್ಣಿ (ರಮೇಶಣ್ಣ) ಹಾದು ಬಂದ ದಾರಿ ಹೋಗುತ್ತಿರುವ ಹಾದಿ ಎಲ್ಲವನ್ನು ಗಮನಿಸಿದಂತೆ ಎದೆಯಲ್ಲಿ ಸಮುದ್ರ ಮತ್ತು ಮಳೆಯ ಬೋರ್ಗರೆತ ಹೆಚ್ಚುತ್ತದೆ. ಕಪಾಳದ ತುಂಬೆಲ್ಲಾ ಕಣ್ಣೀರ ಜಿನುಗು ಮಳೆ. ಮರಣದ ನಂತರ ನಮ್ಮನ್ನು ನೆಲದೊಳಗಿನ ಗೋರಿಗಳೊಂದಿಗೆ ಕಾಣಬಾರದು, ಸಹಮಾನವರ ಎದೆಗಳಲ್ಲಿ ಕಾಣುವಂತಾಗಬೇಕು ಎನ್ನುವ ಜಲಾಲುದ್ದೀನ್ ರೂಮಿಯ ಉಕ್ತಿಯನ್ನು ಪ್ರಸ್ತಾಪಿಸಿರುವ ಅವ್ವಣ್ಣಿ ಅದರಂತೆ ಬದುಕುತ್ತಿದ್ದಾರೆ. ಅವ್ವಣ್ಣಿ (ರಮೇಶಣ್ಣ) ನೆಪ್ಪಿಗೆ ಬಂದಾಗಲೆಲ್ಲಾ ಅಣ್ಣಾವ್ರ ಕಸ್ತೂರಿ ನಿವಾಸ ಸಿನಿಮಾ ಮನಪಟಲದಲ್ಲಿ ಮೂಡುತ್ತದೆ. ಅಣ್ಣನನ್ನು ಭೇಟಿಯಾಗಿ ಇಂದಿಗೆ ಸುಮಾರು 20 ದಿನಗಳು ಕಳೆದವು. ಈಗ ಮತ್ತೆ ಮತ್ತೆ ಹೆತ್ತವ್ವ ನೆನೆಪಾಗುತ್ತಾಳೆ. ಆಗಾಗ ಕೆಲಸಕ್ಕೆ ಸಲಾಂ ಹೊಡೆದು ಊರ ಕಡೆ ಓಡಿ ಮತ್ತೆ ಹಿಂತಿರುಗುತ್ತೇನೆ. ಅಣ್ಣ ನನಗೆ ಒಂದು ಪಾಠವಾದ. ಅಣ್ಣ (ಅವ್ವಣ್ಣಿ) ನಂತವರಿಗೆ ಜಗದವ್ವನ ಆಶೀವರ್ಾದ ಇದ್ದೆ ಇರುತ್ತದೆ.

ಅಣ್ಣನ ಸಣ್ಣ ಕವಿತೆ

ರಾಗಿ, ಭತ್ತ

ಹುಟ್ಟುತ್ತ ಬೆಳೆಯುತ್ತ

ಆಗಸವನ್ನೇ ದಿಟ್ಟಿಸುತ್ತವೆ

ಫಲದ ಹೊನ್ನ ಕಿರೀಟ

ಮೈದುಂಬಿಕೊಂಡಾಗ
ನೆಲದತ್ತ ತಲೆ ಬಾಗುತ್ತವೆ.
- ನಾಗತಿಹಳ್ಳಿ ರಮೇಶ
*************************
ನನ್ನವ್ವ ಅಸಂಖ್ಯಾತ ಕನಗಳನ್ನು ಬಾಳಿದಳು
ಆಕೆ ಒಂದನ್ನೂ ಬರೆಯಲಿಲ್ಲ.
ನಾನಾದರೋ ನನ್ನದರ ಜೊತೆಗೆ ಆಕೆಯದನ್ನೂ ಬರೆದೆ.
ತಾಯಿಯ ಎದೆಯಲ್ಲಿ ಮೌನವಾಗಿ ಮಲಗಿದ ಹಾಡು
ಮಗುವಿನ ತುಟಿಯಲ್ಲಿ ಹಾಡುತ್ತದೆ.
- ಖಲೀಲ ಗಿಬ್ರಾನ್.
- ಬಸವರಾಜ ಹಳ್ಳಿ