
ಮನದ ಮೂಲೆಯೊಳಗೆ ಬಚ್ಚಿಟ್ಟೆ ನೂರು ಕನಸುಗಳ
ಸನಿಹವಿದ್ದು ಒಮ್ಮೆಯೂ ನೀ ಒಳಹೊಕ್ಕು ನೋಡಲಿಲ್ಲ.
ಪ್ರೀತಿ ರಕುತದಿ ಬರೆದೆ ಸಾವಿರ ಸಾವಿರ ಓಲೆಗಳ
ಕೈಗೆಟುಕಿದರೂ ಒಮ್ಮೆಯೂ ತಿರುವಿ ನೋಡಲಿಲ್ಲ.
ನಿನ ಅರಸಿ ಮರಭೂಮಿಯಲಿ ಬರಿಗಾಲಲಿ ಓಡಿದೆ
ಅಂಗಾಲಲಿ ಎದ್ದ ಗುಳ್ಳೆಗಳ ನೀ ಕಣ್ಣೆತ್ತಿ ನೋಡಲಿಲ್ಲ.
ಗೋಲಗುಂಬಜಿನಲಿ ನಿನ ಹೆಸರ ಸಾರಿ ಸಾರಿ ಕೂಗಿದೆ
ಏಳೇಳು ಬಾರಿ ಪ್ರತಿಧ್ವನಿಸಿದರೂ ನೀ ಕೇಳಲೇ ಇಲ್ಲ
ನಗುನಗುತಲಿ ಏನೂ ಹೇಳದೆ ಕೇಳದೆ ಹೋದೆಯಲ್ಲ
ನಿನ ಧ್ಯಾನದಲೇ ಕುಣಿಯೊಳಗಿದ್ದ ನನ್ನ ನೀ ನೋಡಲಿಲ್ಲ.
- ಬಸವರಾಜ ಹಳ್ಳಿ, ಹಸಮಕಲ್
very nice one sir..
ಪ್ರತ್ಯುತ್ತರಅಳಿಸಿತುಂಬಾಚೆನ್ನಾಗಿದೆ ಸಾರ್....
ಪ್ರತ್ಯುತ್ತರಅಳಿಸಿ